ಮುಖ ಪುಟ

ಬಾಲ್ಯ ಫೌಂಡೇಶನ್ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಹುಟ್ಟಿಕೊಂಡ ಆದಾಯರಹಿತ ಸ್ವತಂತ್ರ ಸಂಸ್ಥೆ.


ಈ ಸಂಸ್ಥೆಯ ಮೂಲ ಉದ್ದೇಶಗಳು : ಯುವ ಪೀಳಿಗೆಯ ಮಕ್ಕಳಲ್ಲಿ ಒಳ್ಳೆಯ ಪ್ರವೃತ್ತಿ ತುಂಬುವುದು. ಚಿಕ್ಕ ವಯಸ್ಸಿನಲ್ಲಿ ಗುರಿಯನ್ನು ಹೊಂದಬೇಕೆಂಬ ಛಲವನ್ನು ಉಂಟು ಮಾಡುವುದು ಹಾಗುಗುರಿ ಮುಟ್ಟಲು ಅಡ್ಡವಾಗುವ ಅಡೆತಡೆಗಳನ್ನು ಮೆಟ್ಟಿನಿಂತುಸಾಧನೆಗೆ ಅಗತ್ಯವಿರುವ ಭರವಸೆಯನ್ನುಂಟು ಮಾಡುವುದು. ಅಷ್ಟೆ ಅಲ್ಲದೆ ಮಕ್ಕಳ ಪಾಲಕರಲ್ಲಿ ಈಗಿನ ತಾಂತ್ರಿಕ ಯುಗದಲ್ಲಿ ಶಿಕ್ಷಣದ ಅಗತ್ಯತೆ ಮತ್ತು ಅವಶ್ಯಕತೆಯ ಅರಿವು ಮೂಡಿಸುವುದು.ಬಾಲ್ಯ ಫೌಂಡೇಶನ್ ಸಂಸ್ಥೆಯು ಸ್ವಾಮಿ ವಿವೇಕಾನಂದರ ತತ್ವಮದರ್ ತೆರೇಸಾರವರ ಆದರ್ಶ ಗುಣ ಹಾಗು ಡಾ. ಅಬ್ದುಲ್ ಕಲಾಮ್ ರವರ ಸಿದ್ಧಾಂತದಿಂದ ಪ್ರೇರೇಪಿತಗೊಂಡು ೨೦೦೯ರಲ್ಲಿ ಪ್ರಾರಂಭವಾಯಿತು.
 ಬಾಲ್ಯ ಎಂದರೆ ಎಳೆತನ/ಎಳೆವಯಸ್ಸು/ಪುಟ್ಟ ವಯಸ್ಸು ಎಂದರ್ಥ. ಯಾವುದೇ ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರನ್ನು ಸಮಾನ ರೀತಿಯಲ್ಲಿ ಸ್ವೀಕರಿಸುವುದೇ ಬಾಲ್ಯ.