ಕನ್ನಡ ವಿಭಾಗ 

                 KannaKannadaKannaKannadadada Department

ದಿನಾಂಕ : 29-08-2023ರಂದು ನಮ್ಮ ಸಂಸ್ಥೆಯ ಕನ್ನಡ ವಿಭಾಗವು ಐಕ್ಯುಎಸಿ, ಸಾಂಸ್ಕೃತಿಕ ಸಂಘ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ ಪೂರ್ವವಿದ್ಯಾರ್ಥಿನಿ ಕು. ಭಾವನಾ ಡಿ.ವಿ. ಇವರ "ಚಿಂತನ" ಕೃತಿಯ ಅನಾವರಣ ಕಾರ್ಯಕ್ರಮ ಸಂಪನ್ನಗೊಂಡಿತು. 


ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ. ಕೃತಿ ಅನಾವರಣಗೊಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಕರಬ ಕೃತಿ ಪರಿಚಯಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಿವಕುಮಾರ ಪಿ.ಟಿ, ಐಕ್ಯುಎಸಿ ಸಂಯೋಜಕರಾದ ಡಾ. ವಿನಯ್ ಕುಮಾರ್ ಉಪಸ್ಥಿತರಿದ್ದರು.


ಕಾರ್ಯಕ್ರಮದ ಸಂಯೋಜಕರಾದ ಕನ್ನಡ ವಿಭಾಗದ ಶಿವಕುಮಾರ ಅಳಗೋಡು ಸ್ವಾಗತಿಸಿದರು.


2022-2023 ನೇ ಸಾಲಿನಲ್ಲಿ ಕನ್ನಡ ವಿಭಾಗವು  ನಡೆಸಿದ "ಗಣಕಯಂತ್ರದಲ್ಲಿ ಕನ್ನಡ ಕಲಿಕೆ" ಸರ್ಟಿಫಿಕೆಟ್ ಕೋರ್ಸಿನ ಪ್ರಮಾಣಪತ್ರವನ್ನು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ನೀಡಿದರು.


ವಿದ್ಯಾರ್ಥಿನಿಯರಾದ ಪನ್ನಗಾ ರಾವ್ ನಿರೂಪಿಸಿದರು. ಶಾಂತಿಕಾ ಪ್ರಾರ್ಥಿಸಿ, ಹರ್ಷಿತಾ ವಂದಿಸಿದರು.




ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಈ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು. ಈಗ  ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ  ಮಾರ್ಗದರ್ಶನದಲ್ಲಿ  ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷರಾಗಿದ್ದಾರೆ. ಈ  ಸಂಸ್ಥೆಯು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಕ್ಕೊಳಪಟ್ಟಿದೆ. ನ್ಯಾಕ್‌ನಿಂದ ಎ (೩.೧೯ಸಿಜಿಪಿಎ) ಮಾನ್ಯತೆ ಪಡೆದಿದೆ. ಡಾ.ಚಂದ್ರಶೇಖರ ಕಂಬಾರ, ರಾಜಗೋಪಾಲಾಚಾರ್ಯ, ಯಾದವಾಡ್‌, ರಾಮದಾಸ, ಶ್ರೀಧರ ಭಟ್‌, ಮುರಳೀಧರ ಉಪಾಧ್ಯ  ಡಾ. ಶ್ರೀಕಾಂತ್ ಸಿದ್ದಾಪುರ ಈ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಗೋಪಾಲಕೃಷ್ಣ ಅಡಿಗರು ಈ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು.ವಿಭಾಗದ ಚಟುವಟಿಕೆಗಳ ವಿವರಗಳಿಗಾಗಿ ಈ ಬ್ಲಾಗ್‌ ನೋಡಿ 


kannada teaching for high school student 

ದಿನಾಂಕ : 31-05-2022ರಂದು ಕನ್ನಡ ವಿಭಾಗದ ವತಿಯಿಂದ ಆರಂಭಿಸಿದ "ಗಣಕಯಂತ್ರದಲ್ಲಿ ಕನ್ನಡ ಕಲಿಕೆ" ಸರ್ಟಿಫಿಕೆಟ್ ಕೋರ್ಸಿನ ಉದ್ಘಾಟನಾ ಸಮಾರಂಭದ ಅಂಗವಾಗಿ ಡಾ. ಅರುಣ ಕುಮಾರ್ ಎಸ್. ಆರ್. ಇವರಿಂದ "ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ"  ವಿಷಯದ ಕುರಿತು ವಿಶೇಷ ಉಪನ್ಮಾಸ ಕಾರ್ಯಕ್ರಮ ಸಂಪನ್ನಗೊಂಡಿತು. 

ಕಾರ್ಯಕ್ರಮದ ಸಂಯೋಜನೆ: ಶಿವಕುಮಾರ ಅಳಗೋಡು, ಉಪನ್ಯಾಸಕರು, ಕನ್ನಡ ವಿಭಾಗ


12-10-2020

ಕನ್ನಡ ವಿಭಾಗದ ಉಪನ್ಯಾಸಕರಾದ ಶಿವಕುಮಾರ ಅಳಗೋಡು ಇವರು ರಚಿಸಿದ "ದೇವಸೇನಾ ಪರಿಣಯ" (ರಾಜ್ಯಮಟ್ಟದ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ವಿಜೇತ ಕೃತಿ) ಹಾಗೂ "ದಂಡಕ ದಮನ" ಎನ್ನುವ ಎರಡು ಯಕ್ಷಗಾನ ಪ್ರಸಂಗಕೃತಿಗಳನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅನಾವರಣಗೊಳಿಸಿದರು. 

ಬಳಿಕ ಮುಖ್ಯ ಅಭ್ಯಾಗತರಾಗಿ ಆಗಮಿಸಿರುವ ಯಕ್ಷಗಾನದ ಪ್ರಸಿದ್ಧ ಭಾಗವತರಾಗಿರುವ  ಕಾವ್ಯಶ್ರೀ ಅಜೇರು ಇವರು ಕೃತಿಕಾರರ ಕೃತಿಗಳಿಂದ ಆಯ್ದ 33 ಛಂದಸ್ಸಿನ 33 ಪದ್ಯಗಳನ್ನು 33 ರಾಗಗಳಲ್ಲಿ ಹಾಡಿ ಉಡುಪಿ ಶ್ರೀ ಅದಮಾರು ಮಠದ 33ನೇ ಪೀಠಾಧಿಪತಿಗಳಾಗಿರುವ ಶ್ರೀ ಶ್ರೀ ಶ್ರೀ ವಿಶ್ವಪ್ರಿಯತೀರ್ಥರ ಪಾದಕಮಲಗಳಿಗೆ ಸಮರ್ಪಿಸಿ ಭಕ್ತಿಪೂರ್ವಕವಾಗಿ ವಂದಿಸಲಾಯಿತು. 


ದಿನಾಂಕ : 26-05-2023ರಂದು ಮಣಿಪಾಲ ರೇಡಿಯೋ ಸ್ಟೇಷನ್ನಿನಲ್ಲಿ ನಮ್ಮ ಸಂಸ್ಥೆಯ ಕನ್ನಡಭಾಷಾ ವಿದ್ಯಾರ್ಥಿಗಳಿಂದ ಸ್ವರಚಿತ ಕವನ ವಾಚನ, ಭಾಷಣ, ಕನ್ನಡ ಗೀತೆಗಳ ಗಾಯನ, ಏಕಪಾತ್ರಾಭಿನಯದ ಸಂಭಾಷಣೆ, ಸ್ವರಚಿತ ಸಣ್ಣಕಥಾ ವಾಚನ ಮೊದಲಾದ ವೈವಿಧ್ಯಮಯ ಕಾರ್ಯಕ್ರಮದ ರೆಕಾರ್ಡಿಂಗ್ ಸಂಪನ್ನಗೊಂಡಿತು.

ಕಾರ್ಯಕ್ರಮದ ಸಂಯೋಜಕರು: ಶಿವಕುಮಾರ ಅಳಗೋಡು, ಉಪನ್ಯಾಸಕರು, ಕನ್ನಡ ವಿಭಾಗ


https://fb.watch/l2xWcXS5Xk/?mibextid=RUbZ1f


ದಿನಾಂಕ : 13-12-2022ರಂದು ಕನ್ನಡ ವಿಭಾಗದ ವತಿಯಿಂದ ಆರಂಭಿಸಿದ "ಗಣಕಯಂತ್ರದಲ್ಲಿ ಕನ್ನಡ ಕಲಿಕೆ" ಸರ್ಟಿಫಿಕೆಟ್ ಕೋರ್ಸಿನ ಉದ್ಘಾಟನಾ ಸಮಾರಂಭದ ಅಂಗವಾಗಿ ಡಾ. ಹೆಚ್.ಕೆ ವೆಂಕಟೇಶ್ ಇವರಿಂದ "ಗಣಕಯಂತ್ರದಲ್ಲಿ ಕನ್ನಡ ಬಳಕೆ"  ವಿಷಯದ ಕುರಿತು ವಿಶೇಷ ಉಪನ್ಮಾಸ ಹಾಗೂ ವಿದ್ಯಾರ್ಥಿಗಳಿಂದ ವಿಶ್ವವಿದ್ಯಾಲಯದ ಪದವಿ ಪಠ್ಯಗಳಲ್ಲಿರುವ ಕುಮಾರವ್ಯಾಸಭಾರತ ಹಾಗೂ ಜೈಮಿನಿಭಾರತದ ಆಯ್ದ ಪದ್ಯಗಳ "ಯಕ್ಷಗಾಯನ-ಯುಗಳ ಸಂವಾದ" ಕಾರ್ಯಕ್ರಮ ಸಂಪನ್ನಗೊಂಡಿತು. 

ಕಾರ್ಯಕ್ರಮದ ಸಂಯೋಜನೆ: ಶಿವಕುಮಾರ ಅಳಗೋಡು, ಉಪನ್ಯಾಸಕರು, ಕನ್ನಡ ವಿಭಾಗ


ReplyForward


" ಪಠ್ಯ ಆಧಾರಿತ ಚಲನಚಿತ್ರ ವೀಕ್ಷಣೆ  ಕಿರಗೂರಿನ ಗಯ್ಯಾಳಿಗಳು "

ಮಂಗಳೂರು ವಿಶ್ವವಿದ್ಯಾಲಯ ದ್ವಿತಿಯ ಬಿ.ಕಾಂ ವಿದ್ಯಾರ್ಥಿಗಳ  II ಸೆಮಿಸ್ಟರ್ ನ ಕನ್ನಡ ಪಠ್ಯದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ "ಕಿರಗೂರಿನ ಗಯ್ಯಾಳಿಗಳು "  ದೀರ್ಘಕಥೆಯನ್ನು ಪಠ್ಯವಾಗಿಸಿದೆ. ಇದೆ ಕಥೆಯನ್ನಾಧರಿಸಿ ಕಿರಗೂರಿನ ಗಯ್ಯಾಳಿಗಳು ಚಲನಚಿತ್ರವನ್ನು ಸಹ ನಿರ್ಮಿಸಲಾಗಿದೆ. ಕಥೆಯ ನೈಜತೆಯನ್ನು ಅರ್ಥೈಸಲು ಕಿರಗೂರಿ ಗಯ್ಯಾಳಿಗಳು ಕಥೆ ಮತ್ತು  ಚಲನಚಿತ್ರ ಎರಡನ್ನು ತೌಲನಿಕವಾಗಿ ಅರ್ಥೈಸುವ, ವಿಮರ್ಶಿಸುವ ಕಾರ್ಯವನ್ನು ಮಾಡಲಾಯಿತು.  

ದಿನಾಂಕ 16 ಅಗಸ್ಟ್ 2022 

ದಿನಾಂಕ 19 ಅಗಸ್ಟ್  2022

ರಂದು  ದ್ವಿತಿಯ ಬಿ.ಕಾಂ (A) ಮಕ್ಕಳಿಗೆ ಕಿರಗೂರಿನ ಗಯ್ಯಾಳಿಗಳು ಚಲನಚಿತ್ರವನ್ನು ತರಗತಿಯಲ್ಲಿಯೆ ವೀಕ್ಷಿಸಲು ಅವಕಾಶ ಮಾಡಲಾಗಿತ್ತು.

ಕಿರಗೂರಿನ ಗಯ್ಯಾಳಿಗಳು’ ತದ್ವಿರುದ್ಧವಾದ ಸಿನಿಮಾ. ಹಾಗೆ ನೋಡಿದರೆ ಭೂಗತ ಲೋಕದ ಸಿನಿಮಾಗಳಲ್ಲಿ ಮಹಿಳೆಯರ ಪಾತ್ರಗಳೇ ಗೌಣವಾಗಿರುತ್ತವೆ. ಇದರಲ್ಲಿ ಸಿನಿಮಾ ಹೆಸರೇ ಸೂಚಿಸುವಂತೆ ಮಹಿಳೆಯರು ಪ್ರಧಾನ ಭೂಮಿಕೆಯಲ್ಲಿದ್ದಾರೆ. ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯನ್ನು ಪರಿವರ್ತಿಸುವ ಆಶಯದ ಕಥಾನಕವನ್ನು ಸುಮನ್ ಕಿತ್ತೂರು ಆರಿಸಿಕೊಂಡಿದ್ದಾರೆ.

ತೇಜಸ್ವಿಯವರ ಮೂಲ ಕತೆಯ ನಿರೂಪಣೆಯಲ್ಲಿ ಕಿರುಗೂರು ಸಹ್ಯಾದ್ರಿ ಪರ್ವತಗಳ ಜಟಿಲ ಬಂಧಗಳಲ್ಲಿ ಬಂದಿಯಾಗಿ ಸಿಕ್ಕಿಕೊಂಡಿದ್ದ ಹಳ್ಳಿಯಾಗಿದೆ. ಅಲ್ಲಿಯ ಗಂಡಸರು ಹೆಂಡ ಕುಡಿದು ಬೀಡಿ ಸೇದಿ ಹೊಗೆ ಹತ್ತಿ ಸಣಕಲಾಗಿರುವುದನ್ನು ವಿವರಿಸುವ ನಿರೂಪಕ ಕಿರಗೂರಿನ ಹೆಣ್ಣು ಮಕ್ಕಳು ಮಾತ್ರ ತಮ್ಮ ಉಜ್ವಲ ಸೌಂದರ್ಯದಿಂದ ನೊಡಿದವರನ್ನು ಬೆಚ್ಚಿ ಬೀಳಿಸುತ್ತಿದ್ದರು ಎಂದು ವರ್ಣಿಸುತ್ತಾನೆ. ಲಿಂಗ ತಾರತಮ್ಯತೆಯ ಸಾಮಾಜಿಕ ಮೌಲ್ಯಗಳನ್ನು ಬುಡಮೇಲು ಮಾಡುವ ಕಥಾನಕವನ್ನು ಸಿನಿಮಾ ಒಳಗೊಂಡಿದೆ. ಮೂಲ ಕತೆ ಹಾಗೂ ಸಿನಿಮಾದ ಶೀರ್ಷಿಕೆಯಲ್ಲಿರುವ `ಗಯ್ಯಾಳಿ’ ಎಂದರೆ `ಗಂಡುಬೀರಿ’, `ಘಾಟಿ ಹೆಂಗಸು’, ’ಗಟ್ಟಿಗಿತ್ತಿ’, ’ಬಲು ಜೋರಿನವಳು’ ಎನ್ನುವ ಅರ್ಥಗಳಿವೆ. ಅಷ್ಟೇ ಅಲ್ಲದೆ ಕತೆಯ ನಿರೂಪಣೆಯಲ್ಲಿ ಕೂಡ ಕಿರಗೂರಿನ ಜನರು ಅವರನ್ನು ’ಗಾಂಚಲಿ ಮುಂಡೇರು’, ’ಬಜಾರಿಯರು’ ಎಂದೇ ಕರೆಯುತ್ತಾರೆ. ಇದು ಮಹಿಳೆಯರನ್ನು ನಿಂದಾತ್ಮಕ ಹಾಗೂ ನೇತ್ಯಾತ್ಮಕ ನಿಟ್ಟಿನಿಂದಲೇ ನೋಡುವ ಪುರುಷ ಪ್ರಧಾನ ವ್ಯವಸ್ಥೆಯ ಧೋರಣೆಯಾಗಿದೆ. ಈ ವ್ಯವಸ್ಥೆಯು ಹೆಣ್ಣಿನಲ್ಲಿ ಕೋಮಲತೆ, ವಿಧೇಯತೆ, ಅಧೀನತೆ, ಸೇವಾ ಭಾವನೆ, ಕ್ಷಮೆ, ತಾಳ್ಮೆಯಂತಹ ಗುಣಗಳು ಇರಬೇಕೆಂದು ನಿರೀಕ್ಷಿಸುತ್ತದೆ. ಇಂತಹ ಗುಣ ಸ್ವಭಾವಗಳನ್ನು ಹೊಂದಿರುವವರನ್ನು ಮಾತ್ರವೇ ಆದರ್ಶ ಹೆಣ್ಣೆಂದು ಗೌರವಿಸಲಾಗುತ್ತದೆ. ಆದರೆ ಸಿನಿಮಾ ಕಿರಗೂರಿನ ಮಹಿಳೆಯರಲ್ಲಿ ಧೈರ್ಯ, ಸಾಹಸ, ಪ್ರತಿಭಟನೆ, ಆಕ್ರಮಣಾಶೀಲತೆ, ಉಗ್ರವಾದ ಕೋಪ, ಪ್ರಶ್ನಿಸುವ ಸಾಮರ್ಥ್ಯ ಮುಂತಾದ ಗುಣಗಳಿರುವುದನ್ನು ನಿರೂಪಿಸುತ್ತದೆ. ಇವು ಪುರುಷರಲ್ಲಿರುವುದು ಸಹಜ ಎನ್ನುವ ನಂಬಿಕೆ ಇರುತ್ತದೆ; ಇಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ಇವು ಮಹಿಳೆಯರಲ್ಲಿ ಕೂಡ ಇರಬಹುದಾದ ಸಹಜ ಗುಣಗಳೇ ಎಂಬುದನ್ನು ನಿರೂಪಿಸುವುದು ಈ ಕಥಾ ವಸ್ತುವಿನ ದೊಡ್ಡ ಶಕ್ತಿಯಾಗಿದೆ.

’ಕಿರಗೂರಿನ ಗಯ್ಯಾಳಿಗಳು’ ಪ್ರಕಟವಾದ ಆರಂಭದಲ್ಲಿಯೇ ನಾಟಕವಾಗಿ ರೂಪಾಂತರಗೊಂಡಿದೆ. ನೀಳ್ಗತೆಯೊಂದು ರಂಗಭೂಮಿಯ ಮಾಧ್ಯಮಕ್ಕೆ ಅಳವಡುವಾಗ ನಿರ್ದೇಶಕರ ಅಪೇಕ್ಷೆಯಂತೆ ಬದಲಾವಣೆಗಳನ್ನು ಪಡೆದುಕೊಳ್ಳುತ್ತದೆ. ಅದೇ ಕತೆಯು ಮಾಧ್ಯಮದ ಸ್ವರೂಪಕ್ಕೆ ಅನುಗುಣವಾಗಿ ಕೆಲವು ಮಾರ್ಪಾಟುಗಳನ್ನು ಕಂಡಿದೆ. ತೇಜಸ್ವಿಯವರ ಕತೆಯನ್ನು ಓದಿದವರು ಅದರ ಸೂಕ್ಷ್ಮತೆಯನ್ನು ಮರೆತು ’ಕಿರಗೂರಿನ ಗಯ್ಯಾಳಿಗಳು’ ಸಿನಿಮಾ ನೋಡುವವರಿಗೆ ಶುದ್ಧ ಮನರಂಜನಾತ್ಮಕ ಹಾಗೂ ಉತ್ತಮ ಸಿನಿಮಾ ಎಂದೇ ತೋರುತ್ತದೆ.  


ಆಯೋಜಕರು : ಡಾ.ನಾಗರಾಜ.ಜಿ.ಪಿ



ದ್ವಿತಿಯ ಬಿ.ಕಾಂ (A) ಮಕ್ಕಳು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಿರಗೂರಿನ ಗಯ್ಯಾಳಿಗಳು ಚಲನಚಿತ್ರ ವಿಕ್ಷಿಸುತ್ತಿರುವುದು.





ದ್ವಿತಿಯ ಬಿ.ಕಾಂ (A) ಮಕ್ಕಳು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಿರಗೂರಿನ ಗಯ್ಯಾಳಿಗಳು ಚಲನಚಿತ್ರ ವಿಕ್ಷಿಸುತ್ತಿರುವುದು.



ವಿದ್ಯಾರ್ಥಿಗಳಿಂದ ಸೆಮಿನಾರ್ 

07-01-2023 ರಂದು ಬಿ.ಎ.ಮೊದಲ ಸೆಮಿಸ್ಟರ್ ನ  ವಿದ್ಯಾರ್ಥಿಗಳಿಗೆ  ಸೆಮಿನಾರ್ ಆಯೋಗಿಸಲಾಗಿತ್ತು.

ಮಂಗಳೂರು ವಿಶ್ವವಿದ್ಯಾನಿಲಯ ಬಿ.ಎ.ಮೊದಲ ಸೆಮಿಸ್ಟರ್  ನ ಭಾಷಾತರಗತಿಗಳಿಗೆ ಪಂಜೆ ಮಂಗೇಶ ರಾವ್ : ವ್ಯಕ್ತಿತ್ವ ಮತ್ತು ಸಾಹಿತ್ಯ ಜೀವನ ಕುರಿತು ಪಠ್ಯವನ್ನು ಇಡಲಾದಿದೆ. ಈ ಪಾಠವನ್ನು ತರಗತಿಯ ವಿದ್ಯಾರ್ಥಿಗಳಿಗೆ ಹಂಚಿಕೆಮಾಡಿ  ಸೆಮಿನಾರ್ ಮಾಡಲು ಅವಕಾಶ ಕಲ್ಪಿಸಲಾಯಿತು. 

ಇದರಿಂದ ಮಕ್ಕಳಲ್ಲಿ ಭಾಷಾಕೌಶಲಗಳನ್ನು ಅಭಿವೃದ್ಧಿ ಗೊಳಿಸಲಾಯಿತು.


ಆಯೋಜಕರು : ಡಾ.ನಾಗರಾಜ.ಜಿ.ಪಿ


Student Name : Devamma

Student Name :Srikanth

Student Name : Dharmanna

ಸರ್ಟಿಫಿಕೇಟ್ ಕೋರ್ಸ್  : ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಕನ್ನಡ 


ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗೊಳಿಸುವ ನಿಟ್ಟಿನಲ್ಲಿ ಕನ್ನಡ ವಿಭಾಗವು ದಿನಾಂಕ 15-12-2022 ರಂದು ”ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಕನ್ನಡ" ಎಂಬ ಸರ್ಟಿಫಿಕೇಟ್ ಕೋಸ್ ಅನ್ನು ಆರಂಭಿಸಿದೆ.

ಇದರ ಸದುಪಯೋಗವನ್ನು ಎಲ್ಲಾ ಜ್ಞಾನಶಿಸ್ತುಗಳ ವಿದ್ಯಾರ್ಥಿಗಳು ಪಡೆಯುತ್ತಿದ್ಧಾರೆ.




ಆಯೋಜಕರು : ಡಾ.ನಾಗರಾಜ.ಜಿ.ಪಿ


ದಿನಾಂಕ: 21-06-2023ರಂದು 2022-2023ನೇ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಂಡಿರುವ "ಗಣಕಯಂತ್ರದಲ್ಲಿ ಕನ್ನಡ ಕಲಿಕೆ" ಸರ್ಟಿಫಿಕೆಟ್ ಕೋರ್ಸ್ ತರಗತಿಯ ಪರೀಕ್ಷೆ ನಡೆಸಲಾಯಿತು. 

ಕೋರ್ಸಿನ ಸಂಯೋಜಕರು: ಶಿವಕುಮಾರ ಅಳಗೋಡು, ಉಪನ್ಯಾಸಕರು, ಕನ್ನಡ ವಿಭಾಗ


ದಿನಾಂಕ: 23-06-2023ರಂದು ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ "ಮೀನಾಕ್ಷಿ ಕಲ್ಯಾಣ" ಯಕ್ಷಗಾನ ಪ್ರದರ್ಶನ ಸಂಪನ್ನಗೊಂಡಿತು. ಈ ಪ್ರಸಂಗದ ಸಂಯೋಜನೆ ಹಾಗೂ ನಿರ್ದೇಶನ : ಶಿವಕುಮಾರ ಅಳಗೋಡು, ಕನ್ನಡ ಉಪನ್ಯಾಸಕರು 

ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಕೃಪಾಶೀರ್ವಾದದಿಂದ


ದಿನಾಂಕ : 01-07-2023ರಂದು ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಸಂಘದ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಕೂಡುವಿಕೆಯಲ್ಲಿ ಮಾರಣಾಧ್ವರ (ಇಂದ್ರಜಿತು ಕಾಳಗ) ತಾಳಮದ್ದಳೆ ಸಂಪನ್ನಗೊಂಡಿತು.


ಭಾಗವತಿಕೆಯಲ್ಲಿ - ಕಿರಣ್ ಹೆಗಡೆ, ಹಾಡಿಕೈ ಹಾಗೂ ಹರೀಶ್ ಗಾಂವ್ಕರ್, ದ್ವಿತೀಯ ಬಿಎಸ್.ಸಿ

ಮದ್ದಳೆಯಲ್ಲಿ - ರಾಮಕೃಷ್ಣ ಭಟ್, ಹುಲಿಮನೆ

ಹನೂಮಂತ - ಡಾ. ಮಂಜುನಾಥ ಕರಬ, ಮುಖ್ಯಸ್ಥರು, ಕನ್ನಡ ವಿಭಾಗ

ಪೂರ್ವಾರ್ಧದ ಇಂದ್ರಜಿತು - ಶಿವಕುಮಾರ ಅಳಗೋಡು, ಉಪನ್ಯಾಸಕರು, ಕನ್ನಡ ವಿಭಾಗ

ಮಾಯಾಸೀತೆ- ಧೀರಜ್ ಮಲ್ಪೆ
ಆಂಗ್ಲಭಾಷಾ ಉಪನ್ಯಾಸಕರು, ಪದವಿಪೂರ್ವ ವಿಭಾಗ

ಉತ್ತರಾರ್ಧದ ಇಂದ್ರಜಿತು- ಅನುಷಾ ಸಿ.ಹೆಚ್., ದ್ವಿತೀಯ ಬಿ.ಎ.
ರಾಮ - ಭರತ್ ಕುಮಾರ್, ದ್ವಿತೀಯ ಬಿಎಸ್.ಸಿ.
ಲಕ್ಷ್ಮಣ - ಹರ್ಷಿತಾ, ದ್ವಿತೀಯ ಬಿಎಸ್.ಸಿ.
ವಿಭೀಷಣ- ಆಶಿಶ್, ದ್ವಿತೀಯ ಬಿಎಸ್.ಸಿ.

ಕಾರ್ಯಕ್ರಮದ ಸಂಯೋಜಕರು : ಶಿವಕುಮಾರ ಅಳಗೋಡು