ಈ ವಿಶ್ವವಿದ್ಯಾಲಯವು 5 ಕಾಲೇಜುಗಳನ್ನು, 30 ಸಂಶೋಧನಾ ಕೇಂದ್ರಗಳನ್ನು, 6 ವಿಸ್ತರಣಾ ಘಟಕಗಳನ್ನು, 5 ಕೃಷಿ ವಿಜ್ಞಾನ ಕೇಂದ್ರಗಳನ್ನು ಮತ್ತು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ ಹೊಂದಿದೆ. ಉತ್ತರ ಕರ್ನಾಟಕದ 7 ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ, ಮತ್ತು ಉತ್ತರ ಕನ್ನಡ ಇವುಗಳಲ್ಲಿ ಇದರ ಕಾರ್ಯವ್ಯಾಪ್ತಿ ಹೊಂದಿದೆ. ಇಲ್ಲಿ ಮಣ್ಣು, ಹವಾಮಾನ, ಬೆಳೆಪದ್ಧತಿ ಇವುಗಳಲ್ಲಿ ಸಾಕಷ್ಟು ವೈವಿದ್ಯತೆಯನ್ನು ಕಾಣಬಹುದಾಗಿದೆ. ಇದರ ಕಾರ್ಯವ್ಯಾಪ್ತಿಯು ಒಣಬೇಸಾಯದಿಂದ ಹಿಡಿದು ಭಾರೀ ಮಳೆಬಿಳುವ ಹಾಗೂ ನೀರಾವರಿ ಪ್ರದೇಶಗಳನ್ನು ಆವರಿಸಿದೆ. ಜೋಳ, ಹತ್ತಿ, ಭತ್ತ, ಬೆಳೆಕಾಳು, ಮೆಣಸಿನಕಾಯಿ, ಕಬ್ಬು, ಶೇಂಗಾ, ಸೂರ್ಯಕಾಂತಿ, ಗೋಧಿ, ಕುಸುಬೆ ಮುಂತಾದ ಮುಖ್ಯ ಬೆಳೆಗಳನ್ನು ಇದರ ವ್ಯಾಪ್ತಿಯಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಇದಲ್ಲದೆ ಈ ಪ್ರದೇಶವು ತೋಟಗಾರಿಕಾ ಬೆಳೆಗಳಿಗೂ ಹೆಸರುವಾಸಿಯಾಗಿದೆ.
ಶೈಕ್ಷಣಿಕ, ಸಂಶೋಧನಾ ಹಾಗೂ ವಿಸ್ತರಣಾ ಕಾರ್ಯಗಳಲ್ಲಿ ಈ ವಿಶ್ವವಿದ್ಯಾಲಯದಿಂದ ಗಣನೀಯ ಪ್ರಮಾಣದಲ್ಲಿ ಪ್ರಗತಿಯನ್ನು ದಾಖಲಿಸಲಾಗಿದೆ.