ಕಂಪ್ಯೂಟರಿನಲ್ಲಿ ಕನ್ನಡವನ್ನು ಉಳಿಸಿ
ಕರ್ನಾಟಕ ಸರಕಾರಕ್ಕೊಂದು ಪತ್ರ ಪಿ ಡಿ ಎಫ್ ಆವೃತ್ತಿ: ಮೇಲಿನ ಪತ್ರಕ್ಕೆ ನೀವೂ ಸಹಿ ಹಾಕಿ ಈ ವಿಳಾಸಗಳಿಗೆ ಫ್ಯಾಕ್ಸ್ ಅಥವ ಅಂಚೆ ಮೂಲಕ ಕಳುಹಿಸಬಹುದು. | ಕರ್ನಾಟಕ ಸರ್ಕಾರ ಇತ್ತೀಚೆಗೆ ಮೈಕ್ರೋಸಾಫ್ಟ್ ನೊಂದಿಗೆ ಸಹಿ ಹಾಕಿದ ತಿಳಿವಳಿಕೆ ಪತ್ರಕ್ಕೆ ವಿರೋಧ ವ್ಯಕ್ತಪಡಿಸೋಣ. ವಿರೋಧ ವ್ಯಕ್ತಪಡಿಸಲಿಕ್ಕೆ ಬೇಕಾದ ಎಲ್ಲ ಮಾಹಿತಿಯನ್ನ, ಸರಕಾರಕ್ಕೆ ನಿಮ್ಮ ಆಕ್ಷೇಪಣೆಯನ್ನು ಕಳುಹಿಸಲಿಕ್ಕಾಗಿ ಬೇಕಾದ ಪತ್ರದ ಪ್ರತಿಯನ್ನ ಈ ಗೂಗಲ್ ಪುಟದಲ್ಲಿ ಪಡೆಯಿರಿ: ಸೂಚನೆ :- ಸರಕಾರಿ ಕಚೇರಿಗಳು ಇ-ಮೇಲ್ ಗಳಿಗೆ ಸ್ಪಂದಿಸುವುದಿಲ್ಲವಾದುದರಿಂದ ಸಾಮಾನ್ಯ ಅಂಚೆ ಅಥವಾ ಫ್ಯಾಕ್ಸ್ ಜೊತೆಗೆ ದಾಖಲೆಗಾಗಿ ಒಂದು ಇ-ಮೇಲ್ ಕೂಡಾ ಕಳುಹಿಸುವುದು ಉತ್ತಮ. ಮುಖ್ಯಮಂತ್ರಿಗಳನ್ನು ಸಂಭೋದಿಸಿ ಬರೆಯಲಾಗಿರುವ ಈ ಮನವಿಯ ಒಕ್ಕಣೆಯನ್ನು ಕಳುಹಿಸುವವರು ತಮಗೆ ಸರಿ ಎನ್ನಿಸುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಸ್ವತಂತ್ರರು. ಹೀಗೆ ಮನವಿಯನ್ನು ಕಳುಹಿಸಿದವರು ಈ ಕುರಿತಂತೆ savekannada@gmail.com ಇ-ಮೇಲ್ ವಿಳಾಸಕ್ಕೆ ಅದನ್ನು ತಪ್ಪದೆ ತಿಳಿಸಿ. ಒಟ್ಟು ಪ್ರತಿಭಟನಾ ಪತ್ರಗಳ ಸಂಖ್ಯೆಯನ್ನು ಅರಿಯಲು ಸುಲಭವಾಗುತ್ತದೆ. ಹೆಚ್ಚಿನ ಮಾಹಿತಿ : - ಕನ್ನಡವನ್ನು ಸದಾ ಕಡೆಗಣಿಸುವ ಮೈಕ್ರೋಸಾಫ್ಟ್ ಧೋರಣೆಯನ್ನು ವಿರೋಧಿಸಲು ಅಂತರ್ಜಾಲದಲ್ಲಿ ನಡೆದ ಚರ್ಚೆಗಳು ಮತ್ತು ಇತರೆ ಲೇಖನಗಳ ಲಿಂಕುಗಳನ್ನು ಕೆಳಗೆ ನೀಡಲಾಗಿದೆ:
ಮೈಕ್ರೋಸಾಫ್ಟಿನ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಇರುವ ತೊಂದರೆಗಳು ಏನೇನು?
ಕಣ್ಣರಳಿಸಿ ನೋಡು ಕನ್ನಡಿಗ ಹೊರಗೇನು ನಡೆದಿದೆ:
ಕಹಿ ಸತ್ಯಗಳು ಇತಿಹಾಸದ ಪುಟಗಳಿಂದ : ಶೀತಲ ಸಮರದ ಸಮಯದಲ್ಲಿ ಅಮೇರಿಕಾ ರಷ್ಯಾಗೆ ಮಾರಿದ ಸಾಫ್ಟ್ ವೇರ್ ಉಪಯೊಗದಿಂದಾಗಿ ಆದ ಹಾನಿಯನ್ನ ಕೆಳಕೊಟ್ಟಿರುವ ಕೆಲವು ಕೊಂಡಿಗಳು ವಿವರಿಸುತ್ತವೆ. ಸರಕಾರಕ್ಕೆ ಸಂಬಂದ ಪಟ್ಟ ದಾಖಲೆಗಳನ್ನ ಬಹುರಾಷ್ಟ್ರೀಯ ಕಂಪನಿ ನೀಡುವ ಸಾಫ್ಟ್ ವೇರ್ ನಲ್ಲಿ ಕೂಡಿಡುವುದು ಉಚಿತವಲ್ಲ ಎನ್ನಲಿಕ್ಕೆ ಇಷ್ಟು ಸಾಲದೇ? ಹೊಸ ಸುದ್ದಿ : ಈ ಪುಟವನ್ನು ಬದಲಾಯಿಸುವಲ್ಲಿ ಪಾಲ್ಗೊಳ್ಳಲು, ತಪ್ಪುಗಳನ್ನು ತಿದ್ದುವಲ್ಲಿ ಸಹಾಯ ಮಾಡಲು, ಹಾಗೂ ಪ್ರತಿಭಟನೆಯ ಹಲವು ಕಾರ್ಯಗಳಲ್ಲಿ ಪಾಲ್ಗೊಳ್ಳಲು ಉತ್ಸಾಹವಿರುವವರು ದಯವಿಟ್ಟು ಒಂದು ಇ-ಮೇಯ್ಲ್ ಕಳುಹಿಸಿ.
| ಸುದ್ದಿಯಲ್ಲಿ...
ಪ್ರತಿಕ್ರಿಯೆ |
ಸಾರ್ವಜನಿಕ ಹಿತಾಸಕ್ತಿಗಾಗಿ - ಅಕ್ಟೋಬರ್-೨೦೦೭
